1. ಆದರ್ಶ ಗೃಹಸ್ಥನಾಗುವುದು , ಆದರ್ಶ ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. ---- ಸ್ವಾಮಿ ವಿವೇಕಾನಂದ.
2. ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ. -----ಎಮರ್ಸನ್.
3. ಪ್ರೀತಿಯಿಂದಾಡಿದ ಪ್ರತಿಯೊಂದು ನುಡಿಯು ಸಿಡಿಲಿನಂತೆ ಪರಿಣಾಮಕಾರಿ. -------ಸ್ವಾಮಿ ವಿವೇಕಾನಂದ.
4. ಗಟ್ಟಿ ಯಾವುದು , ಜಳ್ಳು ಯಾವುದು ಎಂಬುದನ್ನು ತಿಳಿದು ಶಾಶ್ವತವಾದ ಸತ್ಯವನ್ನು ಹುಡುಕುವುದು ನಮ್ಮ ಧರ್ಮವಾಗಬೇಕು.-----.ಬಿ.ಎಂ.ಶ್ರೀ.
5. ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು. ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ----- ವಿನೋಬಾ ಭಾವೆ.
6. ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು , ತೂಗುವುದು , ಅಳೆಯುವುದು.---- ಗೋಪಾಲಕೃಷ್ಣ ಅಡಿಗ.
7. ನಿಮ್ಮಷ್ಟಕ್ಕೆ ನೀವೇ ಬೆಳೆಯಬೇಕು.ಅದಕ್ಕಾಗಿ ಬೇರೊಬ್ಬ ಶಿಕ್ಷಕನಿರುವುದಿಲ್ಲ.------ ಸ್ವಾಮಿ ವಿವೇಕಾನಂದ.
8. ಕಲಿಕೆ ವಿಷಯ ಬರೀ ತಿಳುವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್ ಅಥವಾ ಗುರು. ------ ಪಿ. ಲಂಕೇಶ್.
9. ಅನ್ಯರನ್ನು ಆಳು ಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.----- ದ.ರಾ.ಬೇಂದ್ರೆ.
10. ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು.----- ತೀ.ನಂ.ಶ್ರೀ.
11. ನಾವು ಬಿಡುಗಡೆ, ಸ್ವಾತಂತ್ರ್ಯ ಪಡೆಯಬೇಕಾದದ್ದು ಅಜ್ಞಾನದಿಂದ, ಅಧರ್ಮದಿಂದ.---'.ಬಿ.ಎಂ.ಶ್ರೀ.
12. ನಮ್ಮ ಹಕ್ಕುಗಳಿಗಾಗಿ ಹೋರಾಡಲು ಎಲ್ಲಿ ಅವಕಾಶ ಇದೆಯೋ ಅಲ್ಲಿ ಪ್ರಜಾಪ್ರಭುತ್ವ ಇದೆ ಎಂದೇ ಅರ್ಥ. ------ ರೋಜರ್ ನಾಶ್ ಬಾಲ್ಡಿವಿನ್.
13. ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ.-------ಮಹಾತ್ಮಾ ಗಾಂಧಿ.
14. ದೈವ ಸಹಾಯವಿಲ್ಲದೆ ಜಯವಿಲ್ಲ. ಸ್ವಪ್ರಯತ್ನವಿಲ್ಲದೆ ದೈವ ಸಹಾಯವೂ ಇಲ್ಲ.----- ಡಿ.ವಿ.ಜಿ.
15. ಕೆಟ್ಟದ್ದನ್ನು ಮಾಡಲೇಬೇಕೆಂದವನಿಗೆ ಅವಕಾಶದ ಕೊರತೆ ಇರದು.-------ಪಿ.ಸೈರಸ್
16. ಇನ್ನಬ್ಬರ ದುಃಖದಲ್ಲಿ ಸಂತೋಷ ಕಾಣಬೇಡ.------ಪಿ.ಸೈರಸ್.
17. ನಮ್ಮ ಹೆಚ್ಚಿನ ದುಃಖ, ಸಂಕಟಗಳಿಗೆ ನಾವೇ ಕಾರಣ.------ಸಾಫೋಕ್ಲಿಸ್.
18. ಧೈರ್ಯ ಅಂದರೆ ಭಯ ಇಲ್ಲದಿರುವುದಲ್ಲ, ಭಯದ ಮೇಲೆ ಜಯ ಸಾಧಿಸುವುದು.---- ನೆಲ್ಸನ್ ಮಂಡೇಲಾ.
19. ಮತ್ತೆ ಮತ್ತೆ ಯಾವ ಪುಸ್ತಕ ಓದುತ್ತೇವೆಯೋ ಅದು ಉತ್ತಮವಾದ ಪುಸ್ತಕ. ---------ಜಾನ್ ರಸ್ಕಿನ್.
20. ನಾವು ಮಾಡಿದ ಅಲ್ಪ ಸಾಧನೆ , ಮಾಡಬೇಕಾದ ಬೃಹತ್ ಕಾರ್ಯಕ್ಕೆ ನಮ್ಮನ್ನು ಕುರುಡಾಗಿಸಬಾರದು.-----ಎಸ್ . ರಾಧಾಕೃಷ್ಣನ್.
21. ಪ್ರೀತಿಯು ಒಡೆತನವನ್ನು ಪ್ರತಿಪಾದಿಸುವುದಿಲ್ಲ. ಸ್ವಾತಂತ್ರ್ಯವನ್ನು ನೀಡುತ್ತದೆ. ------- ರವೀಂದ್ರನಾಥ್ ಟ್ಯಾಗೋರ್.
22. ಭಕ್ತಿ ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು.ಅದು ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. ------ಡಿ.ವಿ.ಜಿ.
23. ದುಡಿಮೆಯು ಅತ್ಯಂತ ಹೆಚ್ಚು ಬೆಲೆಬಾಳುವ ಬಂಡವಾಳ. -------ಕಾರ್ಲ್ ಮಾರ್ಕ್ಸ್.
24. ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿನಿಂದ ಬೆಳೆಯುವುದಕ್ಕಾಗಿ .--------ಶಿವರಾಮ ಕಾರಂತ.
25. ಧನವಿದ್ದವರೇ ಧನಿಕರಲ್ಲ, ಜ್ಞಾನವೇ ಧನದ ನಿಧಿ.------ಪಂಡಿತ ತಾರಾನಾಥ.
26. ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ.-----ಸ್ವಾಮಿ ವಿವೇಕಾನಂದ.
1. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.------ ಕುವೆಂಪು
2. ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. ----- ಅಬ್ರಹಾಂ ಲಿಂಕನ್.
3. ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. ----- ಸರ್ವಜ್ಞ.
4. ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.----- ಜೋಯೆಲ್ ಆಸ್ಟಿನ್ .
5. ಜಾತಿಯನ್ನು ಕೇಳಬೇಡಿ , ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.---- ನಾರಾಯಣ ಗುರು.
6. ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.----- ಆಲ್ಬರ್ಟ್ ಐನ್ ಸ್ಟೀನ್
7. ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ.-----ತ.ರಾ.ಸು.
8. ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ. -----ಡಿ.ವಿ.ಜಿ.
9. ಮೌನ ಅನಂತದಷ್ಟು ಆಳವಾದದ್ದು.ಮಾತು ಕಾಲದಷ್ಟು ಕ್ಷಣಿಕ. ---- ಥಾಮಸ್ ಕಾರ್ಲೈಲ್.
10. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ಸರ್.ಫಿಲಿಪ್ ಸಿಡ್ನಿ.
11. ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. ------ ರಾಬರ್ಟ್ ಬ್ರೌನಿಂಗ್ .
12. ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. -----ಪಿ.ಸೈರಸ್.
13. ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.----ಎ.ಪಿ.ಜೆ.ಅಬ್ದುಲ್ ಕಲಾಂ.
14. ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.----- ಗಳಗನಾಥ.
15. ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.------ ಶಿವರಾಮ ಕಾರಂತ.
16. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. -----ಕುವೆಂಪು.
17. ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.----- ಬುದ್ಧ.
18. ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.-----ಗುರುನಾನಕ್.
19. ರೂಪ ಕಣ್ಣುಗಳಿಗೆ ಸೀಮಿತ.ಗುಣ , ಆತ್ಮದವರೆಗೆ ತಲುಪುವ ಸಾಧನ.-----ತ್ರಿವೇಣಿ.
20. ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.---- ಸ್ವಾಮಿ ವಿವೇಕಾನಂದ.
21. ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. ----- ಮಹಾಭಾರತ.
22. ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.----ರಂ.ಶ್ರೀ.ಮುಗಳಿ.
23. ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.-----ಹೆನ್ರಿ ಫೋರ್ಡ್.
24. ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. ----- ರಾಮಕೃಷ್ಣ ಪರಮಹಂಸ.
25. ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. ---- ಎಸ್. ವಿ.ರಂಗಣ್ಣ.
26. ನಮ್ಮ ಗುಣಗಳ ನೆರಳೇ ನಮ್ಮ ಲೋಕಗಳು.----- ಎಮರ್ ಸನ್.
27. ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. ----- ಮಹಾತ್ಮಾ ಗಾಂಧಿ.
28. ನಿರ್ಭಯವೂ ನಿಷ್ಪಕ್ಷಪಾತವೂ ಆದ ಜಗತ್ತಿನ ಅನ್ವೇಷಣೆಯೇ ವಿಜ್ಞಾನ. ----' ಸಿ.ವಿ.ರಾಮನ್.
29. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.----- ಕೆ.ಎಂ. ಮುನ್ಷಿ.
30. ನಮ್ಮ ಧರ್ಮಗಳು ನಮಗೆ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮಗಳು ಏಕೆ.? ---- ಸಿದ್ಧೇಶ್ವರ ಸ್ವಾಮಿಜಿ.
31. ಲೋಕವೆಂಬುದೊಂದು ಸಂತೆ, ಬೇಕು ಬೇಡಗಳ ಕಂತೆ, ಸಾಕು ನಮಗಾ ಚಿಂತೆ.----- ಡಿ.ವಿ.ಗುಂಡಪ್ಪ.
32. ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. ---- ಗೌತಮ ಬುದ್ಧ.
33. ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.----- ವಾಲ್ಟ್ ವಿಟ್ಮನ್.
34. ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ. ----- ಸ್ವಾಮಿ ವಿವೇಕಾನಂದ.
35. ಶ್ರಮಜೀವಿಯಂತೆ ಕೆಲಸ ಮಾಡು .ವೇದಾಂತಿಯಂತೆ ಯೋಚಿಸು.------- ಹೆನ್ರಿ ಬರ್ಗ್.
36. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.------ ಸ್ವಾಮಿ ವಿವೇಕಾನಂದ.
37. ಸುಖದಲ್ಲೂ ಭಯ , ಅಪಾಯ ಇದೆ. ಕಷ್ಟದಲ್ಲೂ ಹಿತ , ಭರವಸೆ ಇದೆ. ----- ಫ್ರಾನ್ಸಿಸ್ ಬೇಕನ್.
38. ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. ------ಆಲ್ಬರ್ಟ್ ಐನ್ ಸ್ಟೀನ್.
39. "ನಮ್ಮನ್ನು ಪ್ರೀತಿಸುವವರಿದ್ದಾರೆ" ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.----- ವಿಕ್ಟರ್ ಹ್ಯೂಗೊ.
40. ತಿಳಿದವಗೆ ಜಗವೆಲ್ಲ ರಸದ ಊಟ.---- ಜಿ.ಎಸ್.ಶಿವರುದ್ರಪ್ಪ.
41. ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! ---- ಡಿ.ವಿ.ಜಿ.
42. ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ. ------ಪ.ಸೈರಸ್.
43. ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.------ಪಿ.ಸೈರಸ್.
44. ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.----- ರವೀಂದ್ರನಾಥ್ ಟ್ಯಾಗೋರ್.
45. ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ, ಯಾವ ಸರ್ಕಾರಕ್ಕೆ ಅದನ್ನು ಸಾಧಿಸುವ ರೀತಿ ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ. -----ಮೆಕಾಲೆ.
46. ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ.----- ಎ.ಆರ್.ಕೃಷ್ಣ ಶಾಸ್ತ್ರಿ.
47. ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.---- ಸಾಕ್ರೆಟಿಸ್.
48. ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ.----- ಥಾಮಸ್ ಕಾರ್ಲೈಲ್.
49. ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.------- ಇಂಗರ್ ಸಾಲ್.
50. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. ------ಮಹಾತ್ಮಾ ಗಾಂಧಿ.
ಒಳ್ಳೆಯ ಮಾತು
- ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.
- ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
-
- 'ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ /
- ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್//
- ಭಾಷೆಯ ಬಗ್ಗೆ ಒಂದು ಸುಭಾಷಿತ; ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ.
- ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ.
- ನಾವಾಡುವ ಮಾತು ನಮ್ಮ ಬದುಕಿಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ:
-
- ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/
- ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ//
- "ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯೂ ಬಾಡಿಹೋಯಿತು(ಸಪ್ಪೆಯಾಯಿತು); ಸಕ್ಕರೆ ಕಲ್ಲಾಗಿಹೋಯಿತು (ರುಚಿಇಲ್ಲದ್ದು). ಅಮೃತವು ಹೆದರಿ ಸ್ವರ್ಗಕ್ಕೆ ಓಡಿಹೋಯಿತು!’
ಸುಭಾಷಿತದ ಶ್ರೇಷ್ಠತೆ
- ಸುಭಾಷಿತಗಳ ಸಂಗ್ರಹದಿಂದ ನಮ್ಮ ಜೀವನದೃಷ್ಟಿ ವಿಶಾಲವಾಗುವುದು; ಜೀವನದ ಎಷ್ಟೋ ಸಂದರ್ಭಗಳ ಗುಣಾವಗುಣಗಳನ್ನು ಸ್ಪಷ್ಟವಾಗಿ ವಿಮರ್ಶಿಸಲು ನೆರವಾಗುತ್ತವೆ; ಅದನ್ನೇ ಸುಭಾಷಿತವೊಂದು ಹೀಗೆಂದಿದೆ:
-
- ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ/
- ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ//
- ‘ಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’[೧]
ಧರ್ಮದ ಬಗೆಗೆ ಸುಭಾಷಿತ
-
- ಸತ್ಯಂ ಬ್ರೂಯಾತ ಪ್ರಿಯಂ ಬ್ರೂಯಾತ್|
- ನಬ್ರೂಯಾತ್ ಸತ್ಯಮಪ್ರಿಯಂ||
- ಪ್ರಿಯಂ ಚ ನಾSನೃತಂ ಬ್ರೂಯಾತ್|
- ಏಷ ಧರ್ಮಃ ಸನಾತನಃ ||
- ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಹೇಳಬೇಡ. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ. [೨]
ವೇದವ್ಯಾಸರ ಧರ್ಮ ಸೂತ್ರ
- 1) ಶ್ಲೋಕಾರ್ಧೇನ ಪ್ರವಕ್ಷಾಮಿ,
- ಯದುಕ್ತಂ ಗ್ರಂಥಕೋಟಿಭಿಃ |
- ಪರೋಪಕಾರಃ ಪುಣ್ಯಾಯ,
- ಪಾಪಾಯ ಪರಪೀಡನಂ ||
- ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, 18 ಪುರಾಣಗಳನ್ನೂ, ಶ್ರುತಿ ಸ್ಮøತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.
‘ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; ಪರೋಪಕಾರವೇ ಪುಣ್ಯ, ಪರ ಪೀಡನೆಯೇ ಪಾಪ’.
- 2) ಶ್ರೂಯತಾಂ ಧರ್ಮ ಸರ್ವಸ್ವಂ,
- ಶ್ರುತ್ವಾಚ ಅವಧಾರ್ಯತಾಮ್ |
- ಆತ್ಮನಃ ಪ್ರತಿಕೂಲಾನಿ
- ನ ಪರೇಷಾಂ ಸಮಾಚರೇತ್ ||
- ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, (ಕೇಳಿದ್ದರೂ, ಅದರಲ್ಲಿ ಏನೇ ಹೇಳಿದ್ದರೂ), ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು
ವ್ಯಾಸಭಾರತದ ಪ್ರತಿಜ್ಞೆ
- ಮಹಾಭಾರತದ ಆದಿಪರ್ವದ ಅಂಶಾವತರಣ ಪರ್ವವಾದ 62ನೆಯ ಅಧ್ಯಾಯದಲ್ಲಿ ಶ್ರೀ ಮಹಾಭಾರತದ ಪ್ರಶಂಸೆಂಯು ಬರುವುದು. ಆದರಲ್ಲಿ ವೈಶಂಪಾಯನ ಮುನಿಗಳು ಜನಮೇಜಯ ಮಹಾರಾಜನಿಗೆ ಮಹಾಭಾರತದ ಗುಣವರ್ಣನೆ ಮಾಡುತ್ತಾ, ಶ್ರೀ ಕೃಷ್ಣ ದ್ವೈಪಾಯನ ಮುನಿಯು ಅದ್ಭುತವಾದ ಈ ಮಹಾಭಾರತ ವ್ಯಾಖ್ಯಾನವನ್ನು ಮೂರವರ್ಷಗಳಲ್ಲಿ ರಚಿಸಿದನೆಂದು ಹೇಳಿದರು.
ವೈಶಂಪಾಯನ ಮುನಿ ಮಾಡಿದ ಕೊನಯ ಪ್ರಶಂಸೆಯು ಈರೀತಿ ಇದೆ:
-
- ಧರ್ಮೇ-ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ |
- ಯಧಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ ||64||
- ಭರತಶ್ರೇಷ್ಠನೇ, ಧರ್ಮ, ಅರ್ಥ, ಕಾಮ ಮತು ಮೋಕ್ಷಗಳಿಗೆ ಸಂಬಂಧಿಸಿದ ಯಾವದೇ ವಿಷಯವು ಇದರಲ್ಲಿದ್ದರೆ ಮಾತ್ರ ಅದು ಬೇರೆ ಗ್ರಂಥಗಳಲ್ಲಿ ಸಿಗಬಹುದು. ಆದರೆ ಇದರಲ್ಲಿ ಯಾವುದು ಇಲ್ಲವೋ ಅದು ಬೇರೆಲ್ಲಿಯೂ ಸಿಗಲಾರದು. (ಮಹಾಭಾರತದ ಬಗ್ಗೆ ಈ ಶ್ಲೋಕವು ಬಹಳ ಪ್ರಸಿದ್ಧವಾಗಿದೆ)[೪]
ವಿದ್ಯೆಯಿಂದ ಸುಖ
1. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ.
2. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. -------- ಮಹಾತ್ಮಾ ಗಾಂಧಿ.
3. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -------ಥಾಮಸ್ ಜಫರ್ಸನ್.
4. ಶಾಲೆಯಲ್ಲಿ ಕಲಿತದ್ದು ಮರೆತ ಬಳಿಕವೂ ನೆನಪಲ್ಲಿ ಉಳಿಯುವುದೇ ಶಿಕ್ಷಣ. ------ ಆಲ್ಬರ್ಟ್ ಐನ್ ಸ್ಟೀನ್.
5. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ------- ಸಿಗ್ಮಂಡ್ ಫ್ರಾಯ್ಡ್.
6. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ----------ಸ್ಟೀಫನ್ ಕಿಂಗ್.
7. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ------ಸಾಲ್ವಡೋರ್ ಡಾಲಿ.
8. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್.
9. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------'ಎ.ಆರ್.ರೆಹಮಾನ್.
10. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ------- ಸಾಕ್ರೆಟಿಸ್.
11. ಕ್ರೀಡೆಯಲ್ಲಿ ಕೆಲವೊಮ್ಮೆ ನೀವು ಅಪಾಯಗಳನ್ನು ಆಹ್ವಾನಿಸಲೇಬೇಕು. ಆದರೆ ವಾಸ್ತವದ ಅಪಾಯಗಳನ್ನು ಎದುರಿಸಿ, ಹುಚ್ಚು ಅಪಾಯಗಳನ್ನಲ್ಲ. ----ಸರ್ಗಿ ಬುಬ್ಕಾ.
12. ಶಿಕ್ಷಣ ಎನ್ನುವುದು ಅತ್ಯಂತ ಶಕ್ತಿಶಾಲಿ ಆಯುಧ. ಅದರ ಮೂಲಕ ಜಗತ್ತನ್ನು ಬದಲಿಸಬಹುದು. ------'ನೆಲ್ಸನ್ ಮಂಡೇಲಾ.
13. ಬೆಂಕಿಯಿಲ್ಲದೆ ಮೇಣದ ಬತ್ತಿ ಉರಿಯುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಜೀವನವಿಲ್ಲದೆ ಮನುಷ್ಯ ಬದುಕಲಾರ. -----ಗೌತಮ ಬುದ್ಧ.
14. ಜೀವನದ ಭಯದಿಂದಲೇ ಸಾವಿನ ಭಯವೂ ಹುಟ್ಟುವುದು. ಜೀವನವನ್ನು ಸಂಪೂರ್ಣವಾಗಿ ಜೀವಿಸುವವನು ಸಾಯಲು ಸದಾ ಸಿದ್ಧನಾಗಿರುತ್ತಾನೆ. -----ಮಾರ್ಕ್ ಟ್ವೈನ್.
15. ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ.----- ಸ್ವಾಮಿ ವಿವೇಕಾನಂದ
1. ಯಶಸ್ಸಿನ ಗುಟ್ಟು ಏನು ಗೊತ್ತೆ? ಹಿಡಿದ ಕೆಲಸವನ್ನು ಬಿಡದಿರುವುದು. ---------ಗ್ಲೇಡರ್.
2. ಪುಸ್ತಕ ಪಾಂಡಿತ್ಯಕ್ಕಿಂತ ,ಅನುಭವಕ್ಕೆ ಹೆಚ್ಚಿನ ಬೆಲೆ.-------ಕ್ಯಾಡ್ಮನ್.
3. ಅನುಭವವಿರುವಲ್ಲಿ ಅಮೃತ ವಿದೆ.----- ಭಾರತೀಯ ಗಾದೆ.
4. ಅನುಭವ ಎಂಬ ಗುರುವಿಗೆ ನಾವು ಸಲ್ಲಿಸಬೇಕಾಗಿರುವ ದಕ್ಷಿಣೆ ಅಪಾರವಿದೆ .----ಫ್ರಾಂಕ್ಲಿನ್.
5. ಅನುಭವವೊಂದು ಅಮೂಲ್ಯ ಅಪೂರ್ವ ವಜ್ರ. ಅದಕ್ಕಾಗಿ ಎಷ್ಟೋ ಜನರು ಬೆವರು, ರಕ್ತ ಸುರಿಸಿದ್ದಾರೆ. ---ಶೇಕ್ಸ್ ಪಿಯರ್.
6. ನಿನ್ನನ್ನು ಪ್ರೇಮಿಸುವವರನ್ನು ಪ್ರೇಮಿಸು. ---ವಾಲ್ಟೇರ್.
7. ಬಡವನಿಗೆ ಕನಸುಗಳೇ ಗತಿ.---ಯೇಟ್ಸ.
8. ಬಡವರಾಗಿದ್ದಲ್ಲಿ ಶ್ರೀಮಂತರಂತೆ ನಟಿಸಿ-----ಜನ್ನಿಗೇಜರ್
9. ಪ್ರೇಮ ಕುರುಡು-----ಜಾಫ್ರಿ ಚಾನ್ಸರ್.
10. ಬಡತನವೇ ಅಪರಾಧದ ತಾಯಿ.---ಬ್ರೂಯಿಸ್.
11. ಬಡವರು ಧನ್ಯರು, ಏಕೆಂದರೆ ಸ್ವರ್ಗವೇ ಅವರದು----ಏಸುಕ್ರಿಸ್ತ.
12. ಪ್ರೇಮವು ಪಾಪಿಯನ್ನು ಸುಧಾರಿಸುತ್ತದೆ-----ಟಾಲ್ ಸ್ಟಾಯ್.
13. ಪ್ರೇಮ ಐಶ್ವರ್ಯದೊಂದಿಗೆ ಸಾಯುತ್ತದೆ. ----ಹಾರ್ವೆ.
14. ದಯವೇ ಧರ್ಮದ ಮೂಲ----- ಬಸವಣ್ಣ.
15. ಮಾನವ ಜನಾಂಗವನ್ನು ಬಂಧುಗಳೆಂದು ನೋಡಬೇಕು. ----ಕುರಾನ್
16. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ
ಬಡವನಿಗೆ ಕನಸುಗಳೇ ಗತಿ
ReplyDeletetumba chenagide
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com