1. ಬೇಸರಕ್ಕೆ ಕುತೂಹಲವೇ ಔಷಧಿ. ಕುತೂಹಲಕ್ಕೆ ಯಾವ ಔಷಧಿಯೂ ಇಲ್ಲ. -----ಎಲೆನ್ ಪಾರ್.
2. ಒಬ್ಬ ಮನುಷ್ಯನಿಗೆ ಅವನ ಬಗ್ಗೆಯೇ ನಗಲು ಸಮಯವಿಲ್ಲ ಎಂದಾದಲ್ಲಿ , ಅದು ಇತರರು ಅವನನ್ನು ನೋಡಿ ನಗಲು ಒಳ್ಳೆಯ ಸಮಯ. ----ಥಾಮಸ್ ಸಾಝ್.
3. ನಾವೇನು ಯೋಚಿಸುತ್ತೇವೆ , ತಿಳಿದುಕೊಂಡಿದ್ದೇವೆ ಅಥವಾ ನಂಬದ್ದೇವೆ ಎಲ್ಲವೂ ಕೊನೆಯಲ್ಲಿ ಬೀರುವ ಪರಿಣಾಮ ಅಷ್ಟಕ್ಕಷ್ಟೆ. ನಾವೇನು ಮಾಡಿದ್ದೇವೆ ಎನ್ನುವುದಷ್ಟೇ ಪರಿಣಾಮ ಬೀರುವುದು.---- ಜಾನ್ ರಸ್ಕಿನ್.
4. ದುಷ್ಟ ವಿಚಾರಗಳು , ದುಃಖಕ್ಕೆ ಮೂಲ ಕಾರಣ.---- ಗೌತಮ ಬುದ್ಧ.
5. ಗಂಡಾಂತರ ಅನಿರೀಕ್ಷಿತವಾಗಿ ಅನಿರೀಕ್ಷಿತ ಸ್ಥಳಗಳಲ್ಲಿ ನಮ್ಮನ್ನೇ ಕಾದಿರುತ್ತವೆ.ಆದ್ದರಿಂದ ನಾವು ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು.----- ಗಯಟೆ.
1. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.---- ಡಾ.ಬಿ.ಆರ್.ಅಂಬೇಡ್ಕರ್.
2. ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ನಾವೆಂದೂ ದೊಡ್ಡವರಾಗುವುದಿಲ್ಲ.----ವಲ್ಲಭ ಭಾಯಿ ಪಟೇಲ್.
3. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.---ಮಹಾತ್ಮಾ ಗಾಂಧಿ.
4. ಬೇಟೆಯ ನಂತರ,ಯುದ್ಧದ ವೇಳೆ ಮತ್ತು ಚುನಾವಣೆಗೆ ಮುನ್ನ ಹೇಳುವಷ್ಟು ಸುಳ್ಳುಗಳನ್ನು ಜನ ಇನ್ಯಾವ ಹೊತ್ತಲ್ಲೂ ಹೇಳುವುದಿಲ್ಲ. ----ಬಿಸ್ಮಾರ್ಕ್.
5. ಸತ್ಯಕ್ಕೆ ಒಂದು ಬಣ್ಣ. ಸುಳ್ಳಿಗೆ ನಾನಾ ಬಣ್ಣ. ----ಲ್ಯಾಟಿನ್ ಗಾದೆ.
6. ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.----ಮಹಾತ್ಮಾ ಗಾಂಧಿ.
7. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಮಹಾನ್ ಆಗುವುದಿಲ್ಲ. ----ಎಮರ್ಸನ್.
8. ಜೀವನದಲ್ಲಿ ಪ್ರಾಮಾಣಿಕತೆಗಿಂತ ಐಶ್ವರ್ಯ ದೊಡ್ಡದಲ್ಲ.----ಜಾನ್ ರಸ್ಕಿನ್.
9. ಅರ್ಹರ ಮುಂದೆ ಕೊಂಕಿಲ್ಲದ ತಪ್ಪೊಪ್ಪಿಗೆ , ಮತ್ತೆ ಮಾಡೆನೆಂಬ ಭರವಸೆ ಇವೇ ಪರಿಶುದ್ಧವಾದ ಪಶ್ಚಾತ್ತಾಪ. ----ಮಹಾತ್ಮಾ ಗಾಂಧಿ.
10. ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬದುಕಿಗೆ ಬೇಕಾಗಿರುವುದು ಇದೇ.---- ಜಾನ್ ಕೀಟ್ಸ್.
11. ತಾಳ್ಮೆ ಕಹಿಯಾದರೂ ಅದರ ಫವ ಸಿಹಿ. ---- ರೂಸೊ.
12. ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು.ಅದರಿಂದ ನಿನಗೆ ಅತ್ಯಂತ ಒಳ್ಳೆಯದೇ ಸಿಕ್ಕೀತು.----ಸ್ವಾಮಿ ರಂಗನಾಥಾನಂದ.
13. ದುಃಖಿಸಬೇಡಿ.ನೀವು ಕಳೆದುಕೊಂಡದ್ದು ಇನ್ನೊಂದು ರೂಪದಲ್ಲಿ ನಿಮ್ಮೆದುರು ಬಂದೇ ಬರುತ್ತದೆ. ---- ಜಲಾಲುದ್ದೀನ್ ರೂಮಿ.
14. ಅನುಭವವೆಂದರೆ ತಪ್ಪುಗಳನ್ನು ಮಾಡುವುದು ಮತ್ತು ಅದರಿಂದ ಕಲಿಯುವುದು.---- ಬಿಲ್ ಆಕ್ಮನ್.
15. ದಾರಿ ಗೊತ್ತಿರುವವನು , ದಾರಿಯಲ್ಲಿ ನಡೆಯುವವನು ಮತ್ತು ದಾರಿ ತೋರಿಸುವವನೇ ನಿಜವಾದ ನಾಯಕ. ---- ಜಾನ್ ಮ್ಯಾಕ್ಸ್ ವೆಲ್.
16. ಆಡಳಿತ ಕೆಲಸವನ್ನು ಸರಿ ಮಾಡಿಸುತ್ತದೆ.ನಾಯಕತ್ವ ಸರಿಯಾದ ಕೆಲಸವನ್ನು ಮಾಡಿಸುತ್ತದೆ.-----ಪೀಟರ್ ಡ್ರೆಕರ್.
17. ತಪ್ಪುಗಳನ್ನು ಹುಡುಕಬೇಡಿ; ಪರಿಹಾರಗಳನ್ನು ಹುಡುಕಿ. ----ಹೆನ್ರಿ ಫೋರ್ಡ್.
18. ಹುಟ್ಟು ಹಾಕದೆ ಕುಳಿತವನಿಗೆ ಮಾತ್ರ ದೋಣಿಯಲ್ಲಿ ತೂತು ಕೊರೆಯಲು ಸಮಯವಿರುತ್ತದೆ.---- ಜೀನ್ ಪಾಲ್ ಸಾರ್ತ್ರೆ.
19. ನೀವು ಚಟುವಟಿಕೆಯಿಂದ ಇದ್ದಾಗ ಎಲ್ಲ ಕೆಲಸಗಳೂ ಸುಲಭ.ನೀವು ಸೋಮಾರಿಯಾಗಿದ್ದಾಗ ಎಲ್ಲಾ ಕೆಲಸವೂ ಕಷ್ಟ. ----ಸ್ವಾಮಿ ವಿವೇಕಾನಂದ.
20. ನಿಮ್ಮ ಜೀವನದಲ್ಲಿ ಕೆಲವರು ಆಶೀರ್ವಾದದಂತೆ ಬರುತ್ತಾರೆ; ಇನ್ನು ಕೆಲವರು ಪಾಠದಂತೆ ಬರುತ್ತಾರೆ ----ಮದರ್ ತೆರೆಸಾ.
21. ಕಣ್ಣಿದ್ದು ದೂರದೃಷ್ಟಿ ಇಲ್ಲದಿರುವುದು ,ಕುರುಡರಾಗಿರುವುದಕ್ಕಿಂತ ಕೆಟ್ಟದ್ದು.----- ಹೆಲನ್ ಕೆಲ್ಲರ್.
22. ಸುಖದ ದಾಹ ಮನೆಯೊಳಗೆ ಅತಿಥಿಯಂತೆ ಬರುತ್ತದೆ, ಬಳಿಕ ಅತಿಥೇಯನಾಗುತ್ತದೆ.ಕೊನೆಗೆ ಮನೆಯನ್ನೇ ಆಳುತ್ತದೆ.-----ಗಲೀಲ್ ಗಿಬ್ರಾನ್.
23. ಸಾಮಾನ್ಯವಾಗಿ ನಾಳೆ ಎನ್ನುವುದು ಇಡೀ ವಾರದಲ್ಲಿ ಪುರುಸೊತ್ತೇ ಇಲ್ಲದ ದಿನ. -----ಸ್ಪೇನ್ ಗಾದೆ.
24. ಸತ್ಯವನ್ನು ಹುಡುಕಾಡುವವನನ್ನು ನಂಬಿ; ಸತ್ಯವನ್ನು ಕಂಡುಹಿಡಿದವನನ್ನು ಸಂಶಯಿಸಿ.----ಆಂಡ್ರೆ ಗೈಡ್.
25. ಬರಿಹೊಟ್ಟೆಯಲ್ಲಿ ಇರುವವನಿಗೆ ಆಹಾರವೇ ದೇವರು.---- ಮಹಾತ್ಮಾ ಗಾಂಧಿ.
1. ಎಲ್ಲಕ್ಕೂ ಮನಸ್ಸೇ ಕಾರಣ. ಅದು ಪರಿಶುದ್ಧವಾಗದೆ ಯಾವ ಒಳ್ಳೆಯ ಕೆಲಸವೂ ಆಗುವುದಿಲ್ಲ. ------ಶ್ರೀ ಶಾರದಾದೇವಿ.
2. ಹೊಸ ಪುಸ್ತಕವೊಂದನ್ನು ನೀವು ನಿಮ್ಮ ಮನೆಗೆ ತಂದಿರೆಂದರೆ, ಹೊಸ ಹಿತೈಷಿಯೊಬ್ಬ ನಿಮ್ಮ ಮನೆಗೆ ಬಂದನೆಂದು ತಿಳಿಯಬೇಕು. -----ಹಾ.ಮಾ.ನಾಯಕ.
3. ಕೀರ್ತಿ ಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. -----ಕುವೆಂಪು.
4. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ.-----ಎಮರ್ಸನ್.
5. ಕರೆ ಕಳುಹಿಸದೆ ಬರುವುದು ಎಷ್ಟು ತಪ್ಪೋ , ಕೇಳದೇ ಬುದ್ದಿವಾದ ಹೇಳುವುದು ಅಷ್ಟೇ ತಪ್ಪು. ----- ತ.ರಾ.ಸು.
6. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.-----ಸ್ವಾಮಿ ವಿವೇಕಾನಂದ
7. ಚಿಂತನೆ ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. -----ಜಿಡ್ಡು ಕೃಷ್ಣ ಮೂರ್ತಿ.
8. ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. -----ಪಿ.ಸೈರಸ್.
9. ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.------ಸ್ವಾಮಿ ವಿವೇಕಾನಂದ .
10. ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.----- ಇಟಲಿ ಗಾದೆ.
11. ನಮಗೆ ಒಪ್ಪದ ವಿಚಾರಗಳನ್ನು ವಿಚಾರಗಳಿಂದಲೇ ಹೊಡೆದು ಹಾಕಬೇಕು.ವ್ಯಕ್ತಿಗಳನ್ನು ಹೊಡೆಯುವುದರಿಂದ ವಿಚಾರಗಳನ್ನು ಅಳಿಸಲಾಗುವುದಿಲ್ಲ.----- ಹಾ.ಮಾ.ನಾಯಕ.
12. ತಿಳಿದು ಬದುಕುವುದು ಮನುಷ್ಯ ಧರ್ಮ; ತಿಂದು ಬದುಕುವುದು ಪ್ರಾಣಿ ಧರ್ಮ.-----ದ.ರಾ.ಬೇಂದ್ರೆ.
13. ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ.-----ಪಾಟೀಲ ಪುಟ್ಟಪ್ಪ.
14. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.-----ಮಹಾತ್ಮಾ ಗಾಂಧಿ.
15. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ ಸರ್ ಫಿಲಿಪ್ ಸಿಡ್ನಿ.
16. ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು.-----ರಾಮಕೃಷ್ಣ ಪರಮಹಂಸ.
17. ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ.-----ಮಹಾತ್ಮಾ ಗಾಂಧಿ.
18. ಕಷ್ಟಗಳಲ್ಲಿ ಧೈರ್ಯವನ್ನು ತಳೆದವನೇ ದೊಡ್ಡವನು.------ ಆಚಾರ್ಯ ಸೋಮದೇವ.
19. ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು.-----ಅಬ್ರಹಾಂ ಲಿಂಕನ್.
20. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.----'ಭಗವದ್ಗೀತೆ.
21. ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ.---- ಬೆಂಜಮಿನ್ ಫ್ರಾಂಕ್ಲಿನ್.
22. ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು-----ಶಿವರಾಮ ಕಾರಂತ.
23. ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. ----ಎಮರ್ಸನ್.
24. ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು.------ಕೆ.ಎಸ್.ನಿಸಾರ್ ಅಹಮದ್.
25. ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.-----ಷೇಕ್ಸ್ ಪಿಯರ್.
---------@@@@@@@@@@@@@@@------------
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ReplyDelete